Skip to main content

Featured

ಅಸ್ಸಾಂ, ಕೇರಳ, ಪುದುಚೇರಿ ಚುನಾವಣೆಗಳು: 296 ಕ್ಷೇತ್ರಗಳಿಗೆ ಏಕಕಾಲಿಕ ಮತದಾನ; 5.3 ಕೋಟಿ ಮತದಾರರು ತೀರ್ಮಾನಿಸಲಿದ್ದಾರೆ; ಮೂರು ರಾಜ್ಯಗಳ ಭವಿಷ್ಯ ನಿರ್ಧರಿಸಲಿರುವ ಮಹಾಸಮರ

  ಕೇರಳ - ಅಸ್ಸಾಂ - ಪುದುಚೇರಿ - ವಿಧಾನಸಭಾ ಚುನಾವಣೆ  ಚುನಾವಣೆಯ ಪ್ರಾಮುಖ್ಯತೆ ಮತ್ತು ಅವಲೋಕನ 2026ರ ಏಪ್ರಿಲ್ 9ರಂದು ಅಸ್ಸಾಂ, ಕೇರಳ ಮತ್ತು ಪುದುಚೇರಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳು ದೇಶದ ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹಂತವಾಗಿದೆ. ಈ ಮೂರು ಪ್ರದೇಶಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿರುವುದು ಗಮನಾರ್ಹ ವಿಷಯವಾಗಿದ್ದು, ಸುಮಾರು 5.3 ಕೋಟಿ ಮತದಾರರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಸಂಖ್ಯೆಯೇ ಈ ಚುನಾವಣೆಯ ಮಹತ್ವವನ್ನು ತೋರಿಸುತ್ತದೆ. ಈ ಚುನಾವಣೆಗಳು ಕೇವಲ ಸರ್ಕಾರ ರಚನೆಗಾಗಿ ಮಾತ್ರವಲ್ಲ, ಪ್ರಾದೇಶಿಕ ರಾಜಕೀಯ ಶಕ್ತಿಗಳ ಮತ್ತು ರಾಷ್ಟ್ರೀಯ ಪಕ್ಷಗಳ ನಡುವಿನ ಸಮತೋಲನವನ್ನು ನಿರ್ಧರಿಸುವ ಪ್ರಮುಖ ಪರೀಕ್ಷೆಯಾಗಿವೆ. ಅಸ್ಸಾಂನಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿರುವಾಗ, ಕೇರಳದಲ್ಲಿ ಎಲ್ಡಿಎಫ್ ಸರ್ಕಾರ ತನ್ನ ಆಡಳಿತವನ್ನು ಮುಂದುವರಿಸಲು ಇತಿಹಾಸ ನಿರ್ಮಿಸುವ ಗುರಿ ಹೊಂದಿದೆ. ಪುದುಚೇರಿಯಲ್ಲಿ ಎನ್ಡಿಎ ತನ್ನ ಆಡಳಿತವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಹೊಸ ರಾಜಕೀಯ ಶಕ್ತಿಗಳು ಕೂಡ ತಮ್ಮ ಪ್ರಭಾವವನ್ನು ತೋರಿಸಲು ಕಣಕ್ಕಿಳಿದಿವೆ. ಈ ಚುನಾವಣೆಗಳಲ್ಲಿ ಪ್ರಚಾರವೂ ತೀವ್ರವಾಗಿ ನಡೆದಿದ್ದು, ಅಭಿವೃದ್ಧಿ, ಧರ್ಮ, ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮಸ್ಯೆಗಳು ಪ್ರಮುಖ ವಿಷಯಗಳಾಗಿ ಹೊರಹೊಮ್ಮಿವೆ. ಪ...

ಟ್ರಂಪ್ ಟ್ಯಾರಿಫ್ vs ಸುಪ್ರೀಂ ಕೋರ್ಟ್: ಐತಿಹಾಸಿಕ ತೀರ್ಪು ಮತ್ತು ತಕ್ಷಣದ ಪ್ರತಿಕ್ರಿಯೆ

Trump tariff on global-10%

 ಇತ್ತೀಚಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತಿಕದ ಮೇಲೆ ಹಾಗೂ ಕೆಲವು ದೇಶಗಳ ಮೇಲೆ ಟ್ಯಾರೀಪ್ ಹಾಕುತ್ತಿದ್ದದ್ದು ಎಲ್ಲರಿಗೂ ತಿಳಿದಂತಹ ವಿಷವಾಗಿದೆ . ಈ ನಡುವೆ ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರು ವಿದೇಶಗಳ ಮೇಲೆ ಹಾಕುತ್ತಿರುವ tarrif ಈ ಯೋಜನೆಯು ಅಸಿಂಧುವಾಗಿದೆ ಎಂದು ಘೋಷಣೆ ಮಾಡಿದೆ.

 ತಕ್ಷಣವೇ ಇದಕ್ಕೆ ಸ್ಪಂದಿಸದ ಡೊನಾಲ್ಡ್ ಟ್ರಂಪ್ ಅವರು ಈ ಸುದ್ಡಿ ತಿಳಿದ 3 ಗಂಟೆಯೊಳಗೆ ಜಾಗತಿಕ ಮೇಲೆ ಸುಮಾರು 10% tarrif ಅನ್ನು ಘೋಷಿಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗುತ್ತಿದೆ.

ಈ ಘಟನೆಯ ಹಿನ್ನೆಲೆ 

ದಿನಾಂಕ 20.2.2026 ರಂದು ಅಮೆರಿಕದ ಸುಪ್ರೀಂ ಕೋರ್ಟ್ ಜನ ಸಾಮಾನ್ಯರ ಮಾಹಿತಿ ತಿಳಿದು ಅಲ್ಲಿನ 6-3 ಮತದಾನದ ಮೂಲಕ ಡೊನಾಲ್ಡ್ ಟ್ರಂಪ್ ಅವರು ವಿಧಿಸುತ್ತಿದ್ದ ವಿದೇಶಿಗಳ tarrif ಅನ್ನು ಅಸಿಂಧು  ಅಥವಾ ಅಸಂವಿಧಾನಿಕ ಅದನ್ನು ಹಿಂಪಡೆಯುವಂತೆ ತಿಳಿಸಿತು. 

 ಕಾರಣ ಇದರ ಮೂಲ ಕಾನೂನು 1977 ರ ಇಂಟರ್ನ್ಯಾಶನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್ (IEEP ) ಪ್ರಕಾರ ಇದರ ಅಡಿಯಲ್ಲಿ ಟ್ರಂಪ್ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿ tarrif ಅನ್ನು ವಿಧಿಸಿದ್ದರು. ಇದು ಇತಿಹಾಸದಲ್ಲಿಯೇ ಮಹತ್ವದ ತೀರ್ಪು ಆಗಿದೆ. ಏಕೆಂದರೆ ಅಮೆರಿಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ರಾಷ್ಟ್ರ ಅಧ್ಯಕ್ಷರ tarrif ನೀತಿಯನ್ನು ಅಸಿಂಧು ಅಥವಾ ಅಸಂವಿಧಾನಿಕ ಎಂದು ಘೋಷಿಸಿದೆ. ಹಾಗೆ tarrif ಅಧಿಕಾರವನ್ನು ಮೊಟಕುಗೊಳಿಸಿದ ಘಟನೆ ಇದಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ

ಈ ತೀರ್ಪಿನ ಹಿನ್ನೆಲೆಯಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ನ ನ್ಯಾಯಾಧೀಶರುಗಳಲ್ಲಿ 6 ಜನ ಟ್ರಂಪ್ ವಿರುದ್ಧ ಹಾಗೂ 3 ಜನ ಡೊನಾಲ್ಡ್ ಟ್ರಂಪ್ ಪರವಾಗಿ ಮತ ಚಲಾಯಿಸಿದ್ದಾರೆ. ಇದರ ಅನ್ವಯವಾಗಿ ಅಮೆರಿಕದ ಮುಖ್ಯ ನ್ಯಾಯಾಧೀಶರಾದ ಜಾನ್ ರಾಬರ್ಟ್ ಅವರು ಪ್ರತಿಕ್ರಿಯೆ ನೀಡಿದ್ದು ಟ್ಯಾರಿಫ್ ಹಾಕುವ ಅಧಿಕಾರ ಕೇವಲ ಕಾಂಗ್ರೆಸ್ ಅಥವಾ ಪಾರ್ಲಿಮೆಂಟಿಗೆ ವಹಿಸಿದ್ದು. ಆದರೆ ರಾಷ್ಟ್ರದ ಅಧ್ಯಕ್ಷರು ಈ ರೀತಿಯ ಟ್ಯಾರಿಫ್ ಹಾಕುವ ಹಾಗೆಯೇ ಅನಿಯಮಿತ ಅವಧಿ, ಪ್ರಮಾಣ ಮತ್ತು ನಿರ್ದಿಷ್ಟ ವ್ಯಾಪ್ತಿಯ ಅವಧಿಗೆ ಟ್ಯಾರಿಫ್ ಹಾಕುವ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಸುಪ್ರೀಂ ಕೋರ್ಟ್ ನ ಪ್ರಕಾರ ಇಷ್ಟು ದೊಡ್ಡ ಆರ್ಥಿಕ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಇಲ್ಲಿನ ಕಾಂಗ್ರೆಸ್ನ ಅನುಮತಿ ಪಡೆಯಬೇಕಾಗಿರುತ್ತದೆ. ವಾಸ್ತವವಾಗಿ ಅಮೇರಿಕವು ಯಾವುದೇ ಯುದ್ಧದಲ್ಲಿ ತೊಡಗಿಲ್ಲ ಹಾಗೆಯೇ ಶಾಂತಿಯುತ ಕಾಲದಲ್ಲಿ ರಾಷ್ಟ್ರದ ಅಧ್ಯಕ್ಷರಿಗೆ tarrif ಹಾಕುವ ಅಧಿಕಾರವಿಲ್ಲ ಎಂದು ರಾಬರ್ಟ್ ಅವರು ತಿಳಿಸಿದ್ದಾರೆ. 

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಡೊನಾಲ್ಡ್ ಟ್ರಂಪ್ ಅವರು ನೇಮಿಸಿದ 3 ಜನ ನ್ಯಾಯಮೂರ್ತಿಗಳ ಪೈಕಿ ಇಬ್ಬರು ( ಗೋರ್ಸಚ್ ಮತ್ತು ಕವಾನೋ) ಡೊನಾಲ್ಡ್ ಟ್ರಂಪ್ ವಿರುದ್ಧ ಹೇಳಿಕೆ ನೀಡಿದ್ದಾರೆ. 

ಟ್ಯಾರಿಪ್ ನ ಸಂಗ್ರಹ ಹಾಗೂ ಹಿಂದಿರುಗಿಸುವ ಪ್ರಶ್ನೆ 

ಈ ಟ್ಯಾರಿಫ್ ನಿಂದ ಸಂಗ್ರಹವಾದ ಹಣವನ್ನು ಕೇಳಿದರೆ ಬೆರಗಾಗುತ್ತದೆ.ಅಮೆರಿಕಾದ ಕಷ್ಟಮ್ಸ್ ಹಾಗೂ ಬಾರ್ಡರ್ರೋ ಪ್ರೋಟೆಕ್ಷನ್ನ್ ಪ್ರಕಾರ ಜನವರಿ 20, 2025 ರಿಂದ ಡಿಸೆಂಬರ್ 15, 2025 ರ ವರೆಗೆ ಸುಮಾರು $200 ಬಿಲಿಯನ್( 17 ಲಕ್ಷ ಕೋಟಿ ರೂಪಾಯಿಗಳು) ಗಿಂತ ಹೆಚ್ಚಿನ tarrif ಅನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ IEEPA ಅಡಿಯಲ್ಲಿ $129 ಬಿಲಿಯನ್  ಸಂಗ್ರಹವಾಗಿತ್ತು.  

 ಇದನ್ನು ಹಿಂದಿರುಗಿಸುವ ಪ್ರಶ್ನೆ ಕೋರ್ಟ್ ಇನ್ನೂ ಕಷ್ಟವಾಗಿ ಉತ್ತರ ನೀಡಿಲ್ಲ.ಆದರೆ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಮತ್ತು 'ವಿ ಪೇ ದಿ ಟ್ಯಾರಿಫ್ಸ್' ಸಂಸ್ಥೆ ಕೂಡಲೇ ಇದನ್ನು ಆಯಾ ದೇಶಗಳಿಗೆ ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದೆ. ಹಾಗೆಯೇ ಇಂಟರ್ನ್ಯಾಷನಲ್ ಟ್ರೇಡ್ ಕೋರ್ಟ್ ರೀಫಂಡ್ ಮಾಡುವ ಆದೇಶ ಹೊರಡಿಸುವ ಸಾಧ್ಯತೆ ಇದೆ. ಕವಾನೊ ಅವರು ಇದನ್ನು ಹಿಂದಿರುಗಿಸುವ ಸಮಯದಲ್ಲಿ ದೊಡ್ಡ ಗೊಂದಲ ಸೃಷ್ಟಿ ಆಗಬಹುದು ಎಂದು ಹೇಳಿದ್ದಾರೆ.

ಇದಕ್ಕೆ ಡೊನಾಲ್ಡ್ ಟ್ರಂಪ್ ಅವರ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್ನ ಈ ಆದೇಶವನ್ನು ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಅಂದರೆ ಸುಮಾರು ಮೂರು ಗಂಟೆ ಒಳಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಎಲ್ಲಾ ದೇಶಗಳ ಮೇಲೆ ಜಾಗತಿಕವಾಗಿ 10% ರಷ್ಟು ಹೆಚ್ಚಿನ ಟ್ಯಾರೀಫ್ ವಿಧಿಸುವುದಕ್ಕೆ ಸಹಿ ಹಾಕಿದ್ದಾರೆ. ಇದಕ್ಕೆ ಅನುಗುಣವಾಗಿ ಹಿಂದಿನ IEEPA ಆಕ್ಟ್ ಅನ್ನು ಬಳಸದೆ 1974 ರ ಟ್ರೇಡ್ ಆಕ್ಟ್ section 122 ಅನ್ನು ಬಳಸಿದರು. ಇದರ ಅನ್ವಯ ಈ ಕಾಯ್ದೆಯು 150 ದಿನಗಳು ಅಂದರೆ 6 ತಿಂಗಳುಗಳ ಕಾಲ ಇದನ್ನು ಬಳಸಬಹುದು. ಈ ಅವಧಿ ಮುಗಿದ ನಂತರ ಈ ಕಾಯ್ದೆಯು ಮುಂದುವರಿಯಬೇಕೆಂದರೆ ಕಾಂಗ್ರೆಸ್ ಅಥವಾ ಪಾರ್ಲಿಮೆಂಟಿನ ಒಪ್ಪಿಗೆ ಇರಬೇಕು. ಇಲ್ಲವಾದಲ್ಲಿ ಇದು ತಾನಾಗಿಯೇ ಮುಗಿಯುತ್ತದೆ. 

ಹಾಗೆಯೇ ಟ್ರಂಪ್ ಅವರು ಈ ದೇಶದ ಕೆಲ ನ್ಯಾಯಮೂರ್ತಿಗಳು ಸ್ವದೇಶಕ್ಕಾಗಿ ಸರಿಯಾದ ಕ್ರಮ ಕೈಗೊಳ್ಳುವ ಧೈರ್ಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

ಡೊನಾಲ್ಡ್ ಟ್ರಂಪ್ ಅವರ ಟ್ಯಾರೀಫ್ ಇಂದ ಆರ್ಥಿಕ ಪರಿಣಾಮಗಳು

• ಅಮೆರಿಕದ ಕುಟುಂಬಗಳ ಮೇಲೆ ಪರಿಣಾಮ: ನ್ಯೂಯಾರ್ಕ್ ಫೆಡರಲ್ ಬ್ಯಾಂಕ್ ವರದಿಯ ಪ್ರಕಾರ ಅಮೆರಿಕಾದ ಶೇಕಡ 90% ಗ್ರಾಹಕರು ಮತ್ತು ಕಂಪನಿಗಳೇ ಭರಿಸುತ್ತಿದ್ದಾರೆ.

• 2025ರಲ್ಲಿ ಪ್ರತಿ ಕುಟುಂಬವು ಸುಮಾರು $1200 ( 1 ಲಕ್ಷಕ್ಕೂ ಅಧಿಕ) ಭರಿಸಬೇಕಾಗಿತ್ತು, ಆದರೆ 2026ರಲ್ಲಿ ಪ್ರತಿ ಕುಟುಂಬವು ಸುಮಾರು $1600- $2000 ರಷ್ಟು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

• ಡೊನಾಲ್ಡ್ ಟ್ರಂಪ್ ನ ಈ ಪ್ಯಾರಿಸ್ ನಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳು ನಷ್ಟವಾಗಿವೆ. 

• ಸುಮಾರು 30 ಲಕ್ಷಕ್ಕೂ ಅಧಿಕ ಏಷ್ಯನ್ - ಅಮೆರಿಕ ಸಣ್ಣ ಸಣ್ಣ ವ್ಯವಹಾರಗಳು ತೀವ್ರ ಪರಿಣಾಮ ಎದುರಿಸಿದವು.

ಹೊಸ 10% ಟ್ಯಾರೀಫ್ ನ ವಿವರ

• ಎಲ್ಲಾ ದೇಶಗಳಿಂದ ಆಮದು ಆಗುವ ವಸ್ತುಗಳಿಗೆ 10% ರಷ್ಟು ತೆರಿಗೆ. 

• ಕೆಲವು ಖನಿಜ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ 

• ಇದು ಕೇವಲ 150 ದಿನಗಳವರೆಗೆ ಇರುತ್ತದೆ 

• ಇದು ಶೇಕಡ 15% ಗಿಂತ ಜಾಸ್ತಿ ಹಾಕುವಂತಿಲ್ಲ.

• ಈ ನೀತಿ ಮುಂದುವರಿಯಲು ಕಾಂಗ್ರೆಸ್ ನ ಅನುಮತಿ ಅವಶ್ಯಕ.

ಬೆಳವಣಿಗೆ ಮತ್ತು ಪರಿಣಾಮ 

ಈ ತೀರ್ಪು ಡೊನಾಲ್ಡ್ ಟ್ರಂಪ್ ಅವರಿಗೆ ಪೆಟ್ಟು ಬಿದ್ದಂತಾಗಿದೆ . ಏಕೆಂದರೆ ಇದುವರೆಗೆ ಟ್ರಂಪ್ ಅವರ ವಿರುದ್ಧ ಯಾವುದೇ ತೀರ್ಪು ನೀಡಿರಲಿಲ್ಲ ಮೊದಲ್ ಬಾರಿಗೆ ಅವರ ಅಜೇಯತೆಯ ಮೇಲೆ ಪೆಟ್ಟು ಬಿದ್ದಂತಾಗಿದೆ. ಹಾಗೆಯೇ ಕಾಂಗ್ರೆಸ್ ಇವಾಗ ತನ್ನ ವಾಣಿಜ್ಯ ನೀತಿಯ ಅಧಿಕಾರವನ್ನು ಚಲಾಯಿಸಬಹುದಾಗಿದೆ.

 ಹಾಗೆಯೇ ಸುಪ್ರೀಂ ಕೋರ್ಟ್ ನ ಈ ಆದೇಶದಿಂದ ವಿವಿಧ ಕ್ಷೇತ್ರಗಳಿಂದ ಪ್ರತಿಕ್ರಿಯೆ ಬಂದಿವೆ. ವ್ಯವಹಾರಗಳಿಗೆ ಹೆಚ್ಚಿನ ಆದಾಯ ಹಾಗೂ ಸ್ಪರ್ಧಾತ್ಮಕ ವಾತಾವರಣ ಬೆಳೆಯಬಹುದು ಎಂದು ಹೇಳಿದ್ದಾರೆ.

ಮುಂದಿನ ಬೆಳವಣಿಗೆಗಳು

 ಟ್ರಂಪ್ ವಿಧಿಸಿರುವ 10% ಅನ್ನು ನ್ಯಾಯಾಲಯದಲ್ಲಿ ಎದುರಿಸಬೇಕಾಗುತ್ತದೆ. ಹಾಗೆಯೇ 150 ದಿನಗಳ ನಂತರ ಇದು ಮುಂದುವರಿಯುತ್ತದೆ ಎಂಬುದು ಸುಲಭದ ಮಾತಲ್ಲ , ಏಕೆಂದ್ರೆ ಅಲ್ಲಿನ ಕಾಂಗ್ರೆಸ್ ಇದಕ್ಕೆ ಒಪ್ಪುವುದು ಮುಂದಿನ ಚುನಾವಣೆಯ ದೃಷ್ಟಿಯಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ. ಮಾರ್ಚ್ 3 ರಂದು ನ್ಯಾಯಮೂರ್ತಿಗಳು ಹಾಗೂ ಟ್ರಂಪ್ ಅವರು ಮುಖಾಮುಖಿ ಭಾಷಣದಲ್ಲಿ ಭೇಟಿಯಾಗುತ್ತಾರೆ . ಅಲ್ಲಿ ಏನೇನು ಆಗಬಹುದು ಎಂಬ ಕುತೂಹಲವಿದೆ. 

    "ಒಟ್ಟಾರೆಯಾಗಿ ಹೇಳಬೇಕೆಂದರೆ, ಟ್ರಂಪ್ ಅವರ ಟ್ಯಾರಿಫ್ ನೀತಿಗೆ ಸುಪ್ರೀಂ ಕೋರ್ಟ್ ತೀರ್ಪು ದೊಡ್ಡ ಪೆಟ್ಟು ನೀಡಿದೆ. ಆದರೆ ತಕ್ಷಣವೇ ಹೊಸ ಟ್ಯಾರಿಫ್ ಘೋಷಿಸುವ ಮೂಲಕ ಅವರು ಹೋರಾಟ ಮುಂದುವರಿಸಿದ್ದಾರೆ. ಮುಂದಿನ 150 ದಿನಗಳು ಅಮೆರಿಕದ ವ್ಯಾಪಾರ ನೀತಿಯ ದಿಕ್ಕು ನಿರ್ಧರಿಸಲಿವೆ."


Comments