Skip to main content

Featured

ಅಜಿತ್ ಹನುಮಕ್ಕನವರ್ ಅವರ ಮೇಲೆ ಇದ್ದ FIR ಅನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ ಕಾರಣ ಇಲ್ಲಿದೆ ನೋಡಿ

ಅಜಿತ್ ಹನುಮಕ್ಕನವರ್ ಅವರ FIR ರದ್ದು    ಅಸಲಿಗೆ ಏನಾಗಿತ್ತು? ಕರ್ನಾಟಕ ಹೈಕೋರ್ಟ್ ಸುವರ್ಣ ನ್ಯೂಸ್ ಆಂಕರ್ ಅಜಿತ್ ಹನುಮಕ್ಕನವರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ, 2018ರಲ್ಲಿ ನಡೆದ ಟಿವಿ ಚರ್ಚಾ ಕಾರ್ಯಕ್ರಮಕ್ಕೆ ಸಂಬಂಧಿಸಿದ FIR ಮತ್ತು ಮುಂದಿನ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು. ಈ ಪ್ರಕರಣದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಆಂಕರ್ ಕೇಳಿದ ಪ್ರಶ್ನೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಮತ್ತು ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಗಬಹುದು ಎಂದು ದೂರು ನೀಡಲಾಗಿತ್ತು. ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ 153A ಮತ್ತು 505(2 ) ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು, ಟಿವಿ ಚರ್ಚೆಯಲ್ಲಿ ಆಂಕರ್ ಸ್ವತಃ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಅಥವಾ ಹಗೆತನವನ್ನು ಪ್ರಚೋದಿಸುವ ಉದ್ದೇಶ ಹೊಂದಿದ್ದಾನೆ ಎಂಬುದನ್ನು ತೋರಿಸುವ mens rea ( ಅಪರಾಧ ಉದ್ದೇಶ) ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಗಮನಿಸಿತು. ಕಾರ್ಯಕ್ರಮದಲ್ಲಿ ವಿವಿಧ ಅಭಿಪ್ರಾಯಗಳನ್ನು ಹೊರಹಾಕಲು ಪ್ಯಾನೆಲಿಸ್ಟ್‌ಗಳಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿತು. ನ್ಯಾಯಾಲಯದ ಪ್ರಮುಖ ವೀಕ್ಷಣೆ: ನ್ಯಾಯಾಲಯದ ಪ್ರಕಾರ, ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ಯಾನೆಲಿಸ್ಟ್‌ಗಳಿಗೆ ಪ್ರಶ್ನೆ ಕೇಳ...

ರಷ್ಮಿಕಾ - ವಿಜಯ್ ದೇವರಕೊಂಡ ಇಬ್ಬರ ವಿವಾಹ, ಉದಯಪುರದಲ್ಲಿ ಸಜ್ಜಾದ ವಿರೋಶ್ ವಿವಾಹ

 

ರಶ್ಮಿಕಾ - ವಿಜಯ್ ಮದುವೆಯ ಸಮಾರಂಭ

ಯಾವಾಗ ಮದುವೆ?

ಫಿಲ್ಮ್ ಇಂಡಸ್ಟ್ರಿಯಲ್ಲಿ ಖ್ಯಾತಿಯನ್ನು ಪಡೆದಿರುವ ರಷ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹವನ್ನು ಕಾಯುತ್ತಿದ್ದ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ತಂದಿದ್ದಾರೆ. ಅವರು ಫೆಬ್ರುವರಿ 26,2026 ರಂದು ಮದುವೆಯಾಗಲು ನಿಶ್ಚಯಿಸಿಕೊಂಡಿದ್ದಾರೆ. ಸ್ವತಃ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಾಕೊಂಡ ಅವರು ತಮ್ಮ ಅಧಿಕೃತವಾಗಿ ಖಚಿತ ಪಡಿಸಿದ್ದಾರೆ. 

ಎಲ್ಲಿ?

ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರು ಉದಯಪುರದ ಐಷಾರಾಮಿ ಹೋಟೆಲ್ ಆದ ITC ನಲ್ಲಿ ಮದುವೆ ಆಗುತ್ತಾರೆ ಎಂದು ಖಚಿತಪಡಿಸಿದ್ದಾರೆ. ಹಾಗೆಯೇ ಅಭಿಮಾನಿಗಳಿಗೆ ಧನ್ಯವಾದ ರೂಪದಲ್ಲಿ ಈ ಸುದ್ದಿಯನ್ನು  ತಿಳಿಸಿದ್ದಾರೆ.

"ವಿರೋಶ್"- ಅಭಿಮಾನಿಗಳಿಂದ ಪಡೆದ ಹೆಸರಿಗೆ ಮದುವೆಯಲ್ಲಿ ಸನ್ಮಾನ

ವಿರೋಶ್ ಎಂದರೇನು? - ವಿರೋಶ್ ಎಂದರೆ ವಿಜಯ್ + ರಶ್ಮಿಕಾ = ವಿರೋಶ್(VIROSH) ಈ ಹೆಸರನ್ನು ಕೆಲವು ವರ್ಷಗಳ ಹಿಂದೆಯೇ ಅಭಿಮಾನಿಗಳು ಈ ನವ ಜೋಡಿಗೆ ಹೆಸರನ್ನು ಇಟ್ಟಿದ್ದರು . ಹಾಗೆಯೇ ತಮ್ಮ  ಅಭಿಮಾನಿಗಳಿಗೆ ಸಂತಸ ತರುವುದಕ್ಕಾಗಿ ಅವರ ಮದುವೆಗೆ ದಿ ವೆಡ್ಡಿಂಗ್ ಆಫ್ ವಿರೋಶ್ (The Wedding of VIROSH) ಎಂದು ಹೆಸರಿಟ್ಟಿದ್ದಾರೆ. ಹಾಗೆಯೇ ಮಂದಣ್ಣ ಅವರು ' ನೀವು ನಮ್ಮನ್ನು ವಿರೋಶ್ ಎಂದು ಹೆಸರಿತ್ತಿದ್ದೀರಿ, ನಿಮಗೆ ನಮ್ಮ ಮದುವೆಗೆ ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ಗೌರವಾರ್ಥವಾಗಿ ಹೇಳಿಕೊಂಡಿದ್ದಾರೆ.

ಮಂದಣ್ಣ - ವಿಜಯ್ ಪ್ರೇಮಕಥೆ

ಈ ಇಬ್ಬರು ನವ ಜೋಡಿಗಳು ಮೊದಲ ಸಲ ಭೇಟಿಯಾಗಿದ್ದು 2017-2018 ನಲ್ಲಿ ಬಿಡುಗಡೆಯಾದ ಗೀತ ಗೋವಿಂದಂ ಸಿನಿಮಾದಲ್ಲಿ ನಟಿಸಿದ್ದು,ಹಾಗೆಯೇ ಈ ಸಿನಿಮಾ ಸೂಪರ್ ಹಿಟ್ ಆದಾಗ ಈ ಜೋಡಿಯು ಜನರ ಮನ ಗೆದ್ದಿತು. ಅಲ್ಲಿಂದ ಇವರ ಪ್ರೇಮಕಥೆ ಶುರುವಾಯಿತು. ನಂತರ 2019 ನಲ್ಲಿ ಬಿಡುಗಡೆಯಾದ ಡಿಯರ್ ಕಾಮ್ರೇಡ್ ಅನ್ನೋ ಸಿನಿಮಾದಲ್ಲಿ ಇಬ್ಬರು ನಟಿಸಿದರು ಇಲ್ಲಿಂದ ಇವರ ನಡುವೆ ಸಂಬಂಧ ಇನ್ನೂ ಗಟ್ಟಿಯಾಯಿತು.

2020 ರಿಂದ ಇವರಿಬ್ಬರು ಒಟ್ಟಿಗೆ ರಜೆಗೆ ಹೋಗುವುದು ,ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು, ಏರ್ಪೋರ್ಟ್ ಮುಂತಾದ ಸ್ಥಳಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದು ಕಂಡುಬಂದವು. ಹಾಗೆಯೇ 2023 ನಲ್ಲಿ ಅನಿಮಲ್ ಮೂವಿ ನಲ್ಲಿ ನಟಿಸಿದ ಮಂದಣ್ಣ ಬಗ್ಗೆ ವಿಜಯ್ ದೇವರಕೊಂಡಾ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. 2024- 2025 ನಲ್ಲಿ ನಿಶ್ಚಿತಾರ್ಥ ನಡೆದಿರಬಹುದು ಎಂಬ ವದಂತಿಗಳು ಹರಡಿದವು. ನಂತರ 2026 ಫೆಬ್ರುವರಿ ನಲ್ಲಿ ಮದುವೆ ಆಗುವುದರ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ಇವರಿಬ್ಬರ ನಡುವಿನ ವಯಸ್ಸಿನ ಅಂತರ

ವಿಜಯ್ ದೇವರಕೊಂಡ ಅವರು ಮೇ 9, 1989 ನಲ್ಲಿ ಜನಿಸಿದರು ಪ್ರಸ್ತುತ 36 ವಯಸ್ಸು ಹಾಗೆಯೇ ಮಂದಣ್ಣ ಅವರು ಏಪ್ರಿಲ್ 5, 1996 ನಲ್ಲಿ ಜನಿಸಿದರು ಪ್ರಸ್ತುತ 29 ವಯಸ್ಸು, ಇವರ ಇಬ್ಬರ ನಡುವೆ 7 ವರ್ಷ ವ್ಯತ್ಯಾಸ ಇದೆ. ಹಾಗೆಯೇ ಇವರಿಬ್ಬರದು 8 ವರ್ಷಗಳ ಪ್ರೀತಿ ಹಾಗೆ ವಯಸ್ಸಿನಲ್ಲಿ ದೊಡ್ಡ ವ್ಯತ್ಯಾಸವಿದ್ದು, ಅನ್ಯೋನ್ಯತೆ ಹಾಗೂ ಹೊಂದಾಣಿಕೆಯಲ್ಲಿ ಬಲವಿದೆ.

ಉದಯಪುರಕ್ಕೆ ಆಗಮನ

ಈ ಜೋಡಿಯು ತಮ್ಮ ಕುಟುಂಬದ ಸದಸ್ಯರೊಂದಿಗೆ ಫೆಬ್ರುವರಿ 23 ಕ್ಕೆ ಉದಯಪುರದ ಬಂದು ಇಳಿದಿದ್ದಾರೆ.ಏರ್ಪೋರ್ಟ್ ನಲ್ಲಿ ವಿಜಯ್ ಹಾಗೂ ಮಂದಣ್ಣ ಅವರು ಹೊಸ ಲುಕ್ ನೊಂದಿಗೆ ಕಾಣಿಸಿದ್ದು, ಹೊರಗಿರುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು . ಹಾಗೆಯೇ ವಿಜಯ್ ಅವರ ತಂದೆ ಹಾಗೂ ತಮ್ಮ ಆನಂದ್ ದೇವರಕೊಂಡ ಕುಟುಂಬದೊಂದಿಗೆ ಬಂದಿದ್ದಾರೆ. ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಮತ್ತು ತಂಗಿ ಸೈಮನ್ ಮಂದಣ್ಣ ಜೊತೆಗೆ ಬಂದಿದ್ದಾರೆ.

ಮದುವೆಯ ಸಿದ್ಧತೆಗಳು

ಈ ಮದುವೆಯು ಉದಯಪುರದ ಐಷಾರಾಮಿ ರೆಸಾರ್ಟ್ ಆದ ITC ಹೋಟೆಲ್ ನಲ್ಲಿ ನಡೆಯಲಿದ್ದು, ಫೆಬ್ರುವರಿ 24 ರಿಂದಲೇ ಪ್ರಿ ವೆಡ್ಡಿಂಗ್ ಶುರುವಾಗಿದೆ.ಈ ಮದುವೆಗೆ ಕೇವಲ 100 ಜನ ಮಾತ್ರ ಆಹ್ವಾನ ಮಾಡಲಾಗಿದೆ 50 ಜನ ಕುಟುಂಬಸ್ಥರು ಮತ್ತು 50 ಜನ ಆಪ್ತರು. ಈ ಮದುವೆಯು ಸಂಪೂರ್ಣವಾಗಿ ಖಾಸಗಿಯಾಗಿ ನಡೆಯಲಿದೆ. ಹಾಗೆಯೇ ಚಿತ್ರರಂಗದ ಕೆಲ ಸಹನಟರಿಗೂ ಆಹ್ವಾನ ನೀಡಿಲ್ಲ.

ಮದುವೆಯ ವಿಶೇಷ ನಿಯಮ

ಈ ಮದುವೆ ಸಮಾರಂಭಕ್ಕೆ ಆಗಮಿಸುವವರು ಮೊಬೈಲ್ ಬಳಕೆ ಮಾಡುವಂತಿಲ್ಲ , ಕಾರಣ ಯಾವುದೇ ಫೋಟೋಸ್ ಅಥವಾ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಬಾರದು ಎಂಬ ಅವರ ನಿಲುವಾಗಿದೆ. ಮದುವೆಯಲ್ಲಿ ಇರುವ ಫೋಟೋಗ್ರಾಫರ್ ನೋಂದಿಗೆ ಖಾಸಗಿತನಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಇಬ್ಬರು ತಮ್ಮ ವೈಯಕ್ತಿಕ ಜೀವನವನ್ನು ಗೌಪ್ಯವಾಗಿ ಇಡಲು ಎಚ್ಚರ ವಹಿಸಿಕೊಂಡಿದ್ದಾರೆ.

ಮದುವೆ ನಂತರ ಕಾರ್ಯಕ್ರಮ ಎಲ್ಲಿ?

 ಮಂದಣ್ಣ ಹಾಗೂ ವಿಜಯ್ ಅವರು ತಮ್ಮ ಮದುವೆಯ ನಂತರ ರೆಸಿಪ್ಷನ್ ಅನ್ನು ಹೈದರಾಬಾದ್ ನಲ್ಲಿ ಮಾರ್ಚ್ 4 ರಂದು ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಪ್ರಮುಖ ತಾರೆಯರು, ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ಮತ್ತಷ್ಟು ಪ್ರಮುಖ ಸೆಲೆಬ್ರಿಟಿಗಳು ಆಗಮಿಸುವ ನಿರೀಕ್ಷೆ ಇದೆ.

AI ವಿಡಿಯೋ ವೈರಲ್

ಇತ್ತೀಚಿಗೆ ಫೆಬ್ರುವರಿ 2026 ರ ಆರಂಭದಲ್ಲಿ ಮಂದಣ್ಣ ಹಾಗೂ ವಿಜಯ್ ಅವರ ಮದುವೆ ಆಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು ಆದರೆ ಅದು ಸಂಪೂರ್ಣ ಫೇಕ್ ಆಗಿತ್ತು. ಆದರೆ ಈಗ ನಡೆಯುತ್ತಿರುವುದು ಫೇಕ್ ಅಲ್ಲ . 2023 ರಲ್ಲಿ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪ್ರಮುಖ ಸೆಲೆಬ್ರಿಟಿಗಳು ಆಗ್ರಹಿಸಿದರು.

ಮದುವೆಯಲ್ಲಿ ಸಾಂಸ್ಕೃತಿಕ ಪದ್ಧತಿ ಮಿಶ್ರಣ

ಮಂದಣ್ಣ ಅವರು ಮೂಲತಃ ಕೊಡಗು ಜಿಲ್ಲೆಗೆ ಸೇರಿದವರಾಗಿದ್ದಾರೆ. ಅಲ್ಲಿನ ಕೊಡವ ಸಂಪ್ರದಾಯ ಹಾಗೂ ವಿಜಯ್ ಅವರ ತೆಲುಗು ಸಂಪ್ರದಾಯ ಮಿಶ್ರಣ ವಾಗಿ ಈ ಮದುವೆ ನಡೆಯುವ ಸಾಧ್ಯತೆ ಇದೆ. ಹಾಗೆಯೇ ಉದಯಪೂರದಲ್ಲಿ ಅನೇಕ ಸೆಲೆಬ್ರಿಟಿಗಳು ಮದುವೆಯಾಗಿರುವ ತಾಣವಾಗಿದೆ.

   ಒಟ್ಟಾರೆಯಾಗಿ ಈ ಮದುವೆಗೆ ವಿರೋಶ್ ಎಂಬ ಹೆಸರು ಇಟ್ಟಿದ್ದು ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ. ಮಂದಣ್ಣ ಹಾಗೂ ವಿಜಯ್ ಅವರ ಗೀತಾ ಗೋವಿಂದಮ್ ನಿಂದಾ ಶುರುವಾದ ಪ್ರೇಮಕಥೆ ಕ್ಲೈಮಾಕ್ಸ ನಲ್ಲಿ ವಿರೋಶ್ ಎಂಬ ದಂಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಉದಯಪುರದ ನಲ್ಲಿ ನಡೆಯುವ ಈ ಮದುವೆ ಮಾರ್ಚ್ 4 ರಂದು ಹೈದರಾಬಾದ್ ನಲ್ಲಿ ರಿಸೆಪ್ಷನ್ ನಡೆಯಲಿದೆ. ಈ ಸಂಭ್ರಮವನ್ನು ನೋಡಲು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.


Comments