Skip to main content

Featured

ಅಜಿತ್ ಹನುಮಕ್ಕನವರ್ ಅವರ ಮೇಲೆ ಇದ್ದ FIR ಅನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ ಕಾರಣ ಇಲ್ಲಿದೆ ನೋಡಿ

ಅಜಿತ್ ಹನುಮಕ್ಕನವರ್ ಅವರ FIR ರದ್ದು    ಅಸಲಿಗೆ ಏನಾಗಿತ್ತು? ಕರ್ನಾಟಕ ಹೈಕೋರ್ಟ್ ಸುವರ್ಣ ನ್ಯೂಸ್ ಆಂಕರ್ ಅಜಿತ್ ಹನುಮಕ್ಕನವರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ, 2018ರಲ್ಲಿ ನಡೆದ ಟಿವಿ ಚರ್ಚಾ ಕಾರ್ಯಕ್ರಮಕ್ಕೆ ಸಂಬಂಧಿಸಿದ FIR ಮತ್ತು ಮುಂದಿನ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು. ಈ ಪ್ರಕರಣದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಆಂಕರ್ ಕೇಳಿದ ಪ್ರಶ್ನೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಮತ್ತು ಎರಡು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಗಬಹುದು ಎಂದು ದೂರು ನೀಡಲಾಗಿತ್ತು. ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ 153A ಮತ್ತು 505(2 ) ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು, ಟಿವಿ ಚರ್ಚೆಯಲ್ಲಿ ಆಂಕರ್ ಸ್ವತಃ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಅಥವಾ ಹಗೆತನವನ್ನು ಪ್ರಚೋದಿಸುವ ಉದ್ದೇಶ ಹೊಂದಿದ್ದಾನೆ ಎಂಬುದನ್ನು ತೋರಿಸುವ mens rea ( ಅಪರಾಧ ಉದ್ದೇಶ) ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಗಮನಿಸಿತು. ಕಾರ್ಯಕ್ರಮದಲ್ಲಿ ವಿವಿಧ ಅಭಿಪ್ರಾಯಗಳನ್ನು ಹೊರಹಾಕಲು ಪ್ಯಾನೆಲಿಸ್ಟ್‌ಗಳಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬ ಅಂಶವನ್ನೂ ನ್ಯಾಯಾಲಯ ಪರಿಗಣಿಸಿತು. ನ್ಯಾಯಾಲಯದ ಪ್ರಮುಖ ವೀಕ್ಷಣೆ: ನ್ಯಾಯಾಲಯದ ಪ್ರಕಾರ, ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ಯಾನೆಲಿಸ್ಟ್‌ಗಳಿಗೆ ಪ್ರಶ್ನೆ ಕೇಳ...

ಇಸ್ರೇಲ್-ಇರಾನ್ ಯುದ್ಧ ಆರಂಭ: ಅಯತೊಲ್ಲಾ ಖಮೇನೇ ಹತ್ಯೆ, 48 ನಾಯಕರು ಬಲಿ; ಮೂರನೇ ದಿನಕ್ಕೆ ಕಾಲಿಟ್ಟ ಸಂಘರ್ಷ

 

ಇಸ್ರೇಲ್ - ಇರಾನ್ ಯುದ್ಧ - 2026

ಯುದ್ಧದ ಆರಂಭ ಮತ್ತು ಹಿನ್ನಲೆ

ಎಲ್ಲರಿಗೂ ತಿಳಿದಿರುವ ಹಾಗೆ ಇರಾನ್ ದೇಶದ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ದಾಳಿ ನಡೆಸಿದ್ದಾರೆ. ಇದು ಫೆಬ್ರವರಿ 28 , 2026 ಕೆ ಆರಂಭವಾಗಿ ಇಂದಿಗೆ 3 ನೇ ದಿನಕ್ಕೆ ಕಾಲಿಟ್ಟಿದೆ. ಮೊದಲನೇ ದಿನದಲ್ಲಿ ಅಮೇರಿಕಾ ಮತ್ತು ಇಸ್ರೇಲ್ ರಾಷ್ಟ್ರಗಳು ಇರಾನ್ ದೇಶದ ಮೇಲೆ ಜಂಟಿಯಾಗಿ ವೈಮಾನಿಕ ದಾಳಿ ನಡೆಸಿದ್ದವು. ಆದ್ರೆ ಇದು ಕೇವಲ ಮಿಲಿಟರಿ ಗುರಿಯ ಕಾರ್ಯಾಚರಣೆ ಆಗಿರದೆ, ರಾಜಕೀಯ ನಾಯಕತ್ವದ ಮೇಲೆ ನೇರ ಗುರಿ ಇಟ್ಟಂತಾಗಿದೆ. 

  ಆಪರೇಷನ್ ಎಪಿಕ್ ಫ್ಯೂರಿ ಎಂದು ಅಮೇರಿಕಾ ಈ ಯುದ್ದಕ್ಕೆ ಹೆಸರಿಟ್ಟರೆ ಇಸ್ರೇಲ್ ಆಪರೇಷನ್ ಲಯನ್ಸ್ ರೋರ್ ಎಂದು ಹೆಸರು ನೀಡಿದ್ದಾರೆ. ಹೀಗೆಯೇ ಎರಡು ದೇಶಗಳು ಜಂಟಿಯಾಗಿ ದಾಳಿ ನಡೆಸಿವೆ.

ಈ ಯುದ್ಧದ ನೇರ ಕಾರಣಗಳು

• ಪರಮಾಣು ಮಾತುಕತೆ ವಿಫಲ: ಒಮಾನ್ ನ ಮಧ್ಯಸ್ಥಿಕೆಯಲ್ಲಿ ನಡೆದ ಜಿನೀವಾ ಮಾತುಕತೆಗಳು ಇಲ್ಲಿ ಪ್ರಯೋಜನವಾಗಲಿಲ್ಲ.

• ಇರಾನ್ ನಿಲುವು: ಯುದ್ಧದ ನೇರ ಕಾರಣವೇ ಇದಾಗಿದೆ, ಸಂಪೂರ್ಣವಾಗಿ ಪರಮಾಣು ಸಾಮರ್ಥ್ಯವನ್ನು ತ್ಯಜಿಸಲು ಇರಾನ್ ದೇಶವು ಒಪ್ಪಿಗೆ ನೀಡಲಿಲ್ಲ.

• ಇಸ್ರೇಲ್ ಒತ್ತಡ : ಇರಾನ್ ನ ಮಿಲಿಟರಿ ಕ್ರಮಕ್ಕೆ ಇಸ್ರೇಲ್ ಇರಾನಿನ ಮೇಲೆ ಒತ್ತಡ ಹೇರುತ್ತಲೇ ಇತ್ತು 

• ಟ್ರಂಪ್ ಅಲ್ಟಿಮೇಟಮ್ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 10 ರಿಂದ 15 ದಿನಗಳ ಕಾಲ ಅವಕಾಶ ಕೊಟ್ಟಿದ್ದರು, ಅದನ್ನು ಮೀರಿದರೆ ಮಿಲಿಟರಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

   ಈ ಒಪ್ಪಿಗೆಯಲ್ಲಿ ಇರಾನ್ ದೇಶವು ಒಮ್ಮತ ವಹಿಸಿತ್ತದರೂ ಕೆಲವು ರಿಯಾಯಿತಿಗಳನ್ನು ನೀಡಿತ್ತು. ಆದರೆ ಅಮೇರಿಕಾ ಮತ್ತು ಇಸ್ರೇಲ್ ರಾಷ್ಟ್ರಗಳಿಗೆ ಇದಕ್ಕೆ ನಿರೀಕ್ಷೆಗಳಿಗಿಂತ ಅಧಿಕವಾಗಿತ್ತು. ಚೀನಾ ಅಕಾಡೆಮಿಕ್ ಆಫ್ ಸೋಷಿಯಲ್ ಸೈನ್ಸಿನ ತಜ್ಞ ಟ್ಯಾಂಗ್ ಝಿಚಾವೋ ಪ್ರಕಾರ “ ಮಾತುಕತೆಗಳು ಸಂಪೂರ್ಣ ಹೊಗೆ ತೆರೆಯಾಗಿದ್ದವು. ಕಳೆದ ಜೂನ್ ತಿಂಗಳಲ್ಲಿ ಇದೇ ರೀತಿ ನಡೆದಿತ್ತು”.

ಆಯತೊಲ್ಹಾ ಖಮೆನೆ ಹತ್ಯೆ

ಸುಮಾರು 4 ದಶಕಗಳ ಕಾಲ ಆಡಳಿತ ನಡೆಸಿದ್ದ ಆಯತೊಲ್ಹ ಖಮೇನೆ ಯ ಫೆಬ್ರವರಿ 28, 2026 ನಲ್ಲಿ ನಡೆದ  ಹತ್ಯೆಯು ಈ ಯುದ್ಧವನ್ನು ಇನ್ನೂ ಭೀಕರವಾಗುವಂತೆ ಮಾಡಿತು. ಈ ದಾಳಿಯಲ್ಲಿ ಇರಾನ್ ನ ಅಧ್ಯಕ್ಷ ಮಸೂದ್ ಪಜೆಸ್ಕಿಯನ್ ಇನ್ನೂ ಹಲವು ನಾಯಕರು ಗುರಿಯಾದರು. 

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದರು  “ ಭಾನುವಾರ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ದಾಳಿಯಲ್ಲಿ ಇರಾನಿನ 48 ನಾಯಕರುಗಳು ಹತರಾಗಿದ್ದಾರೆ” ಎಂದು ಘೋಷಿಸಿದರು. 

ಇರಾನಿನ ಪ್ರತಿದಾಳಿ

ಇರಾನ್ ದೇಶವು ಈ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಟ್ರೂ ಪ್ರಾಮಿಸ್ 4 ಅನ್ನೋ ದಾಳಿಯನ್ನು ನಡೆಸಿದರು.  ಹತ್ಯೆಯು ಬೆನ್ನಲ್ಲೇ ಇರಾನಿನ ಇಸ್ಲಾಮಿಕ್ ರೇವಾಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಯು ಆಪರೇಷನ್ ಟ್ರೂ ಪ್ರಾಮಿಸ್ 4  ಆರಂಭಿಸಿ 10ನೆ ಅಲೆಯಲ್ಲಿ ಖೇಬರ್ ಕ್ಷಿಪಣಿಗಳನ್ನು ಉಪಯೋಗಿಸಲಾಗಿದೆ ಎಂದು IRGC ಹೇಳಿಕೊಂಡಿದೆ. ಇರಾನ್ ತನ್ನ ಪ್ರತಿದಾಳಿಯ ಗುರಿಗಳು, ಟೆಲ್ ಅವಿವ್, ಹೈಫಾ, ಪೂರ್ವ ಜೆರುಸಲೇಮ್ ಮತ್ತು ನೆತನ್ಯಾಹು ಕಚೇರಿ ಎಂದು ಹೇಳಿಕೊಂಡಿದೆ.

ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ

ಇರಾನ್ ದೇಶವು ಕೇವಲ ಇಸ್ರೇಲ್ ಮತ್ತು ಅಮೆರಿಕದ ಮೇಲೆ ದಾಳಿ ನಡೆಸದೆ , ಎಲ್ಲೆಲ್ಲಿ ಅಮೆರಿಕದ ನೆಲೆಗಳಿವೆಯೋ ಅಲ್ಲಲ್ಲಿ ಕ್ಷಿಪಣಿಗಳ ದಾಳಿ ಮತ್ತು ಡ್ರೋನ್ ದಾಳಿ ನಡೆಸಿದೆ . ಪ್ರಮುಖ ನೆಲೆಗಳು --

• ಬಹ್ರೈನ್ : ಇಲ್ಲಿ ಅಮೆರಿಕದ 5ನೆ ನೌಕಾಪಡೆಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ್ದು, 61 ಕ್ಷಿಪಣಿಗಳನ್ನು ಹಾಗೆಯೇ 34 ಡ್ರೋನ್ಗಳನ್ನು ಪ್ರತಿಬಂದಿಸಲಾಗಿದೆ. 

• ಕುವೈತ್ ಮೇಲೆ ದಾಳಿ ಹಾಗೆ ಕತಾರ್ ಮೇಲೆ ದಾಳಿ ನಡೆಸಿದವು ಇದರಿಂದ ಕತಾರ್ ನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 

• ಅಬುಧಾಬಿಯಲ್ಲಿ ಸ್ಫೋಟಕ ಶಬ್ದ ಕೇಳಿಸಿದ್ದು, ಅಮೆಜಾನ್ ವೆಬ್ ಸರ್ವಿಸಸ್ (AWS)  ಹಾನಿ ಸಂಭವಿಸಿದೆ. ಇದರಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. 

ಲೆಬನಾನ್ ಪ್ರವೇಶ

ಮಾರ್ಚ್ 1 ರಂದು ಇರಾನ್ ಬೆಂಬಲಿತವಾದ ಲೆಬನಾನ್ ನ ಹೆಜ್ಬೊಲ್ಲ ಉತ್ತರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತು. ನವಂಬರ್ 2024 ರ ಕದನ ವಿರಾಮ ಬಳಿಕ ಇದು ಮೊದಲ ದಾಳಿಯಾಗಿದೆ. ಸರ್ವೋಚ್ಚ ನಾಯಕರ ರಕ್ತಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಘೋಷಿಸಿತು. 

 ಇದಕ್ಕೆ ಇಸ್ರೇಲ್ ಬೈರುತ್ ನ ದಕ್ಷಿಣ ಉಪನಗರಗಳ ಮೇಲೆ ಭಾರೀ ಬಾಂಬ್ ದಾಳಿಗಳನ್ನು ನಡೆಸಿತು. ಇದರಿಂದ ಲೆಬನಾನ್ ನಲ್ಲಿ 31 ಜನರು ಸಾವನ್ನಪ್ಪಿದ್ದು, 150 ಜನಗಳಿಗೆ ಗಾಯವಾಗಿದೆ. 

ಇರಾಕ್ ಮತ್ತು ಸಿರಿಯಾದಲ್ಲಿ ಬೆಂಕಿ

ಇರಾಕಿನ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ನೌಕಾಪಡೆಯ ಮೇಲೆ ದಾಳಿ ನಡೆಸಿದ್ದು, ಇರಾಕಿ ಶಿಯಾ ಮಿಲೀಷಿಯ ಸಂಘಟನೆಯ ಸರಯಾ ಅವ್ಲಿಯ ಅಲ್ ದಮ್ ಹೇಳಿಕೊಂಡಿದೆ. ಹಾಗೆಯೇ ಸಿರಿಯಾದ ದಮಸ್ಕಸ್ ನ ಐನ್ ತೆರ್ಮಾ ಪ್ರದೇಶದಲ್ಲಿ ದಾಳಿ ನಡೆಸಿದ್ದು ಅಲ್ಲಿರುವ ಒಬ್ಬ ವ್ಯಕ್ತಿ ಹಾಗೂ ಅವರ ಮೂವರು ಮಕ್ಕಳಿಗೆ ತುಣುಕುಗಳು ಬಿದ್ದು ಗಾಯಗೊಂಡಿದ್ದಾರೆ. 

ಜೆರುಸಲೇಮ್ ಮೇಲೆ ದಾಳಿ ಮತ್ತು ಅಮೆರಿಕದ ಸಾವು ನೋವುಗಳು

ಜೆರುಸಲೇಮ್ ನ ಮುಖ್ಯ ರಸ್ತೆಯೊಂದು ಇರಾನಿನ ಕ್ಷಿಪಣಿ ದಾಳಿಗೆ ಒಳಗಾಗಿದ್ದು ಅಲ್ಲಿ ಮೂವರು ವ್ಯಕ್ತಿಗಳಿಗೆ ಗಾಯವಾಗಿದೆ. ಹಾಗೆಯೇ  ಮೂವರು ಅಮೇರಿಕಾ ಸೇವಾ ಸದಸ್ಯರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೊಂಡಿದೆ. ಹಾಗೆಯೇ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ವಿಡಿಯೋ ಸಂದೇಶದ ಮೂಲಕ ಎಲ್ಲಾ ಗುರಿಗಳು ತಲುಪುವ ವರೆಗೆ ಈ ಯುದ್ಧವು ಮುಂದುವರೆಯುವುದಾಗಿ ಘೋಷಿಸಿದ್ದಾರೆ 

ಸಾವು ನೋವು ಮತ್ತು ಹಾನಿಯ ಅಂಕಿ ಅಂಶಗಳು 

• ಇರಾನ್ ನಲ್ಲಿ ಒಟ್ಟು 555 ಮಂದಿಯ ಅಧಿಕ ಸಾವು ಸಂಭವಿಸಿವೆ ಹಾಗೆ ಇರಾನಿನ 48 ಹಿರಿಯ ನಾಯಕರುಗಳು ಮೃತಪಟ್ಟಿದ್ದಾರೆ. 

• ಲೆಬನಾನ್ ನಲ್ಲಿ 31 ಮಂದಿ ಸಾವು ಹಾಗೆ 150 ಮಂದಿಗೂ ಅಧಿಕ ಗಾಯಗಳು.

• ಅಮೆರಿಕದ 3 ಜನ ಸೇವಾ ಸದಸ್ಯರು ಮೃತಪಟ್ಟಿದ್ದಾರೆ ಹಾಗೆ ಬಹ್ರೈನ್ ನಲ್ಲಿ 61 ಕ್ಷಿಪಣಿಗಳ ಹಾಗೂ 34 ಡ್ರೋನ್ ಗಳ ಪ್ರತಿಬಂಧ.

  ಒಟ್ಟಾರೆ ಈ ಯುದ್ಧದಿಂದ ಕೇವಲ ಸಾವು ನೋವುಗಳು ಅಷ್ಟೇ ಅಲ್ಲದೆ ದೇಶ ದೇಶಗಳ ನಡುವೆ ವೈಮನಸ್ಸು ಉಂಟಾಗಬಹುದು.

ಅಂತಾರಾಷ್ಟ್ರೀಯ ದೇಶಗಳ ಪ್ರತಿಕ್ರಿಯೆ 

• ಚೀನಾ ದೇಶವು ಇರಾನ್ ನ ಸರ್ವೋಚ್ಚ ನಾಯಕನ ಹತ್ಯೆಯು ಸಂಪೂರ್ಣ ಉಲ್ಲಂಘನೆಯಾಗಿದ್ದು, ತಕ್ಷಣವೇ ಕದನ ವಿರಾಮ ನೀಡಿ ಎಂದು ಹೇಳಿದೆ.

• UAE ಯು ತೆಹ್ರಾನ್ ನಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚಿ , ರಾಯಭಾರಿಯನ್ನು ಹಿಂಪಡೆದುಕೊಂಡಿದೆ.

• ಆಸ್ಟ್ರೇಲಿಯ ದೇಶವು ಅಮೇರಿಕಾ ಮತ್ತು ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

• ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆಯು ನಾಗರಿಕ ಮತ್ತು ಆರೋಗ್ಯ ಸೌಲಭ್ಯ ರಕ್ಷಣೆಗೆ ಕರೆ ನೀಡಿದೆ.

ಆರ್ಥಿಕ ಪರಿಣಾಮ

• ತೈಲ ಬೆಲೆಯಲ್ಲಿ ಸುಮಾರು 7% ರಷ್ಟು ಏರಿಕೆಯಾಗಿದೆ

• ಭಾರತದ ಷೇರು ಮಾರುಕಟ್ಟೆಯಲ್ಲಿ ಸುಮಾರು 1200 ಪಾಯಿಂಟ್ಸ್ ನಷ್ಟು ಕುಸಿತ ಕಂಡಿದೆ.

• ನಿಫ್ಟಿ ಸುಮಾರು 1% ರಷ್ಟು ಅಂದ್ರೆ 420 ಪಾಯಿಂಟ್ಸ್ ನಷ್ಟೂ ಕುಸಿದಿದೆ

• ಜಪಾನ್ ನಿಕ್ಕೆ ಸುಮಾರು 2.5% ರಷ್ಟು ಕುಸಿತ ಹಾಗೂ ಚಿನ್ನದ ಬೆಲೆಯಲ್ಲಿ 2% ರಷ್ಟು ಏರಿಕೆ ಕಂಡಿದೆ 

ಮಾರ್ಕ್ಸ್ ಸೇರಿದಂತೆ ಕೆಲವು ಶಿಪ್ಪಿಂಗ್ ಕಂಪೆನಿಗಳು ಸುಯಾಜ್ ಕಾಲುವೆ ಹಾಗೂ ಹಾರ್ಮುಜ್ ಜಲಸಂದಿಯಲ್ಲಿ ಸಂಚಾರ ಸ್ಥಗಿತಗೊಳಿಸಿವೆ. 

ಈ ಯುದ್ಧದ ಮುಖ್ಯ ಉದ್ದೇಶ 

ಕೆಲವು ತಜ್ಞರ ಪ್ರಕಾರ ಈ ಯುದ್ಧವು ಕೇವಲ ಪರಮಾಣು ನಿಶಸ್ತ್ರ ಗೊಳಿಸುವುದು ಮಾತ್ರವಲ್ಲದೆ ಇರಾನ್ ನ ಆಡಳಿತವನ್ನು ಬದಲಾಯಿಸುವುದು ಆಗಿದೆ. 

ಇಸ್ರೇಲ್ - ಇರಾನ್ ಯುದ್ಧವು ಮದ್ಯ ಪ್ರಾಚ್ಯದಲ್ಲಿ ಮತ್ತೆ ಭುಗಿಲು ಎಬ್ಬಿಸಿದೆ. ನಾಯಕ ಆಯತೊಲ್ಲ ಖಮೆನಿ ಯ ಮರಣದ ನಂತರ ಈ ಯುದ್ಧವು ಇನ್ನೂ ಭೀಕರವಾಗಿದ್ದು ಅನೇಕ ಸಾವು ನೋವುಗಳು ಸಂಭವಿಸಿವೆ ಈ ಯುದ್ಧವು ಇನ್ನೂ ಎಷ್ಟು ದಿನಗಳ ಕಾಲ ನಡೆಯುವ ಸಾಧ್ಯತೆ ಇದೆಯೋ ತಿಳಿದಿಲ್ಲ ಹಾಗೆಯೇ ಇದರ ಜಾಗತಿಕ ಪರಿಣಾಮ ಏನೆಂಬುದು ಸ್ಪಷ್ಟವಾಗಿಲ್ಲ . 


Comments