Featured
- Get link
- X
- Other Apps
ಮೋದಿ-ನೆತನ್ಯಾಹು ಮತ್ತೆ ಭೇಟಿ: 9 ವರ್ಷಗಳ ಬಳಿಕ ಇಸ್ರೇಲ್‌ಗೆ ಭಾರತದ ಪ್ರಧಾನಿಯ ಐತಿಹಾಸಿಕ ಭೇಟಿ, 16 ಒಪ್ಪಂದಗಳಿಗೆ ಸಹಿ"
![]() |
| ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ |
ಇಸ್ರೇಲ್ ಭೇಟಿಯ ಸ್ವಾಗತ
ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 25, 26, - 2026 ರಂದು ಇಸ್ರೇಲ್ ಗೆ ಎರಡು ದಿನಗಳ ಕಾಲ ಮಹತ್ವದ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ಗೆ ಇದು ಎರಡನೇ ಭೇಟಿಯಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ 2017ರಲ್ಲಿ ಇಸ್ರೇಲ್ ಗೆ ಪ್ರಥಮ ಭೇಟಿ ನೀಡಿದ್ದರು. ನಂತರ 2026ರಲ್ಲಿ ಭೇಟಿ ನೀಡಿದ್ದಾರೆ.
ವಿಶೇಷ ಸ್ವಾಗತ: ನರೇಂದ್ರ ಮೋದಿಯವರು ಇಸ್ರೇಲ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ ವಿಶೇಷ ಸ್ವಾಗತ ದೊರಕಿತು. ಸ್ವತಃ ಇಸ್ರೇಲ್ ಪ್ರಧಾನಿಯಾದ ಬೆಂಜಮಿನ್ ನೆತನ್ಯಾಹು ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷವಾಗಿ ಆಲಿಂಗನದೊಂದಿಗೆ ಬರಮಾಡಿಕೊಂಡರು. ಜೊತೆಗೆ ನೆತನ್ಯಾಹು ಅವರ ಹೆಂಡತಿ ಶ್ರೀಮತಿ ಸಾರಾ ನೆತನ್ಯಾಹು ಅವರು ಸ್ವಾಗತಿಸಲು ಬಂದಿರುವುದು ಆಶ್ಚರ್ಯವಾಗಿದೆ.
ನೆತನ್ಯಾಹು ಅವರ ಕಚೇರಿಯ ವಕ್ತಾರೆ ಶೋಶ್ ಬೆಡ್ರೋಸಿಯನ್ ಪ್ರಕಾರ “ ಇವರಿಬ್ಬರ ನಡುವೆ ವಿಶೇಷ ಹಾಗೂ ವೈಯಕ್ತಿಕ ಸಂಬಂಧವಿದೆ” ಎಂದು ಹೇಳಿದ್ದಾರೆ.
ನೆಸೆಟ್(ಇಸ್ರೇಲ್ ಸಂಸತ್ತು) ನಲ್ಲಿ ಐತಿಹಾಸಿಕ ಭಾಷಣ
ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ನ ನೆಸೆಟ್ ನಲ್ಲಿ ಫೆಬ್ರುವರಿ 25 ರಂದು ಭಾಷಣ ಮಾಡಿ ಇದೊಂದು ಐತಿಹಾಸಿಕ ಕ್ಷಣ ಆಗಿದೆ ಎಂದು ಹೇಳಿದರು.
ಭಾಷಣದಲ್ಲಿಯ ಪ್ರಮುಖ ಅಂಶಗಳು:
• ಅಕ್ಟೋಬರ್ 7 ರಂದು ನಡೆದ ದಾಳಿಯನ್ನು ಖಂಡಿಸಿದರು. ಹಾಗೆಯೇ ಹಮಾಸ್ ನಡೆಸಿದ ಭಯೋತ್ಪಾದಕ ಹಾಗೂ ಕ್ರೂರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ಇಸ್ರೇಲ್ ಜನತೆಗೆ ಭಾರತದ ಜನತೆಯ ಪರವಾಗಿ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
• ನಿಮ್ಮ ನೋವನ್ನು ಅನುಭವಿಸುತ್ತೇವೆ ಹಾಗೆಯೇ ನಿಮ್ಮ ದುಃಖವನ್ನು ಹಂಚಿಕೊಳ್ಳುತ್ತೇವೆ, ಈ ಕ್ಷಣದಲ್ಲಿಯೂ ಹಾಗೆ ಮುಂದೆಯೂ ಭಾರತವು ಇಸ್ರೇಲ್ ನೊಂದಿಗೆ ಪೂರ್ಣ ನಂಬಿಕೆಯೊಂದಿಗೆ ದೃಢವಾಗಿ ನಿಂತಿದೆ ಎಂದು ಭಾರತದ ಬೆಂಬಲವನ್ನು ತಿಳಿಸಿದರು.
• ತಾಂತ್ರಿಕ ಸಹಕಾರದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಇಸ್ರೇಲ್‌ನ ತಾಂತ್ರಿಕ ನಾವೀನ್ಯತೆ ನಮ್ಮ ಮುಂದಾಲೋಚನೆಯ ಪಾಲುದಾರಿಕೆಗೆ ನೈಸರ್ಗಿಕ ಅಡಿಪಾಯವಾಗಿದೆ.
• ಸಾಂಸ್ಕೃತಿಕ ಸಂಪರ್ಕದಲ್ಲಿ ಯಹೂದಿ ಹಾಗೂ ಹಿಂದೂ ಸಾಂಪ್ರದಾಯಗಳ ನಡುವಿನ ಸಾಮ್ಯತೆಯನ್ನು ವಿವರಿಸಿದ ಮೋದಿಯವರು “ಎಸ್ತರ್ ಪುಸ್ತಕದಲ್ಲಿ ಭಾರತವನ್ನು 'ಹೋಡು' ಎಂದು ಉಲ್ಲೇಖಿಸಲಾಗಿದೆ”.
• ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಹೇಳಿದರು.
ಭಾಷಣದ ವಿಶೇಷತೆ:
• ಮೋದಿಯವರು ಇಸ್ರೇಲ್ನ ಸಂಸತ್ತಿನಲ್ಲಿ ಭಾಷಣ ಮಾಡಿದಾಗ ಎಲ್ಲರೂ ನಿಂತುಕೊಂಡು ಸ್ವಾಗತ ಸೂಚಿಸಿದರು.
• ಭಾಷಣ ಮುಗಿದ ನಂತರ ಸಂಸತ್ತಿನ ಎಂಪಿ ಹಾಗೂ ಎಮ್ಎಲ್ಎ ಗಳು ಮೋದಿಯವರ ಜೊತೆ ಸೆಲ್ಫಿ ತೆಗೆದುಕೊಂಡರು.
• ಭಾಷಣದ ಕೊನೆಯಲ್ಲಿ ಮೋದಿ "Am Yisrael Chai" (ಯಹೂದಿ ರಾಷ್ಟ್ರವು ಜೀವಂತವಾಗಿದೆ) ಮತ್ತು "ಜೈ ಹಿಂದ್" ಎಂದು ಘೋಷಿಸಿದರು .
ಕ್ನೆಸೆಟ್ ಮೆಡಲ್ ಪ್ರಶಸ್ತಿ ನೀಡಿ ಗೌರವ
ಮೋದಿಯವರಿಗೆ ಸಂಸತ್ತಿನಲ್ಲಿ ಉತ್ತಮ ಹಾಗೂ ಗೌರವ ಪೂರ್ವಕವಾದ ಪ್ರಶಸ್ತಿ ನೀಡಲಾಯಿತು ಅದುವೇ "ಸ್ಪೀಕರ್ ಆಫ್ ದಿ ಕ್ನೆಸೆಟ್ ಮೆಡಲ್" ಇದು ಕ್ನೆಸೆಟ್ ನ ಉನ್ನತ ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿಯ ಮಹತ್ವ :
ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಬಲವನ್ನು ಅಭಿವೃದ್ಧಿಪಡಿಸಲು ಮೋದಿ ಅವರ ವೈಯಕ್ತಿಕ ನಾಯಕತ್ವದ ಮೂಲಕ ಈ ಅಸಾಧಾರಣ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಾಗೆಯೇ ಇಸ್ರೇಲ್ ಗೆ ಭೇಟಿ ನೀಡಿದ ಎಲ್ಲಾ ನಾಯಕರುಗಳ ಪೈಕಿ ಪ್ರಧಾನಿ ಮೋದಿಯವರಿಗೆ ಈ ಪ್ರಶಸ್ತಿಯನ್ನು ನೀಡಿರುವುದು ಇಸ್ರೇಲ್ ನ ಮೊದಲ ಇತಿಹಾಸವಾಗಿದೆ. ಇಲ್ಲೇ ತಿಳಿಯುತ್ತದೆ ಭಾರತ ಮತ್ತು ಇಸ್ರೇಲ್ ನ ರಾಜಕೀಯ ಸಂಬಂಧ ಹಾಗೂ ಒಡನಾಟ.
ನೆತನ್ಯಾಹು ಜೊತೆ ದ್ವಿಪಕ್ಷೀಯ ಮಾತುಕತೆ ಮತ್ತು 16 ಒಪ್ಪಂದಗಳು
ಪ್ರಧಾನಿ ನರೇಂದ್ರ ಮೋದಿ ಹಾಗೂ ನೆತನ್ಯಾಹು ಅವರ ನಡುವೆ ವ್ಯಾಪಕವಾದ ಮಾತು ಕಥೆಗಳು ನಡೆದು 16 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
• ರಕ್ಷಣಾ ವ್ಯವಸ್ಥೆಯಲ್ಲಿ ಭಾರತಕ್ಕೆ ಇಸ್ರೇಲ್ನ ಐರನ್ ಬೀಮ್ ಲೇಸರ್ ರಕ್ಷಣಾ ವ್ಯವಸ್ಥೆಗೆ ಪ್ರವೇಶ ನೀಡಲಾಗಿದೆ ಹಾಗೆಯೇ ಕೆಲವು ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ತಯಾರಿಸಲು ಪರವಾನಗಿ ನೀಡಲಾಗಿದೆ.
• ವರ್ಗೀಕೃತ ಮಾಹಿತಿ ಹಂಚಿಕೆಗೆ ಅನುವು ಮಾಡಿಕೊಡುವ ಗೌಪ್ಯತ ಚೌಕಟ್ಟು ಎಂಬ ಗೌಪ್ಯತಾ ಕಾರ್ಯ ವಿಧಾನವನ್ನು ಸ್ಥಾಪಿಸಲಾಗುವುದು.
• ಭಾರತ ಮತ್ತು ಇಸ್ರೇಲ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ಆರಂಭವಾಗಿದೆ.
• ಭಾರತ - ಮಧ್ಯಪ್ರಾಚ್ಯ - ಯುರೋಪ್ ( IMEC ) ಆರ್ಥಿಕ ಕಾರೀಡಾರು ಅಭಿವೃದ್ಧಿ.
• ಹಾಗೆಯೇ ಕೃಷಿ ಸಹಕಾರ ಹಾಗೂ ಸಂಸದೀಯ ಸ್ನೇಹ ಸಂಘ ಸ್ಥಾಪನೆಗೆ ಅವಕಾಶ.
ಇನ್ನು ಮುಂತಾದವು ಒಪ್ಪಂದಗಳು ನಡೆದಿದೆ.
ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ
ಇಂದಿನ ಆನಿಶ್ಚಿತ ಜಗತ್ತಿನಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸಂಬಂಧವು ಅಪರಿಮಿತವಾದದ್ದು, ಭಾರತವು ಇಸ್ರೇಲ್ ನ ಅತಿದೊಡ್ಡ ರಕ್ಷಣಾ ಸಲಕರಣೆ ಖರೀದಿದಾರರಾಗಿದ್ದು, ಭಾರತವು ಶೇಕಡ 34% ರಷ್ಟು ಖರೀದಿ ಮಾಡುತ್ತದೆ. ಭಾರತ ಮತ್ತು ಇಸ್ರೇಲ್ ಡ್ರೋನ್ ಹಾಗೂ ಕ್ಷಿಪಣಿಗಳಂತಹ ಸಲಕರಣೆಗಳನ್ನು ಜಂಟಿಯಾಗಿ ತಯಾರಿಸುತ್ತೇವೆ.
ವ್ಯಾಪಾರ ಮತ್ತು ಆರ್ಥಿಕ ಸಂಬಂಧ
2024 - 25ರಲ್ಲಿ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಾದ ಸರಕುಗಳು ವಜ್ರಗಳು ಆಗಿ ಇನ್ನಿತರ ಸೇವೆಗಳಲ್ಲಿ $5 ಬಿಲಿಯನ್ ರಷ್ಟು ದಾಟಿದೆ ಎಂದು ಅಂದಾಜಿಸಲಾಗಿದೆ. ಇದರ ನಡುವೆ ಸರಕುಗಳ ಸೇವೆಯಲ್ಲಿ $3.62 ಬಿಲಿಯನ್ ರಷ್ಟು ಆಗಿದೆ. ಹಾಗೆಯೇ ಮುಕ್ತ ವ್ಯಾಪಾರ ಒಪ್ಪಂದ (FTA) ಕ್ಕೇ ಸಹಿ ಹಾಕಿದರೆ ಇನ್ನಷ್ಟು ವ್ಯಾಪಾರ ಸಂಬಂಧವೂ ಬೆಳೆಯಬಹುದು ಎಂಬ ನಿರೀಕ್ಷೆ ಇದೆ.
ಇಸ್ರೇಲ್‌ನ ಹೈಫಾ ಬಂದರನ್ನು ಭಾರತದ ಅದಾನಿ ಗ್ರೂಪ್ ಭಾಗಶಃ ಖರೀದಿಸಿದ್ದು, IMEC ಕಾರಿಡಾರ್‌ಗೆ ಇದು ಪ್ರಮುಖ ಕೇಂದ್ರವಾಗಲಿದೆ .
ಯಾದ್ ವಾಷೆಮ್ ಭೇಟಿ ಮತ್ತು ಹೋಲೋಕಾಸ್ಟ್ ಸ್ಮರಣೆ
ಪ್ರಧಾನಿ ನರೇಂದ್ರ ಮೋದಿಯವರು ಜರೂಸಲೇಂ ನಲ್ಲಿ ಇರುವ ಯಾದ್ ವಾಷೆಂ ಹೊಲೋಕಷ್ಟ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸೂಚಿಸಿದರು. ಕ್ರಿಸ್ತಶಕ 1953 ರಲ್ಲಿ ನಾಜಿಗಳು ಹಾಗೂ ಅವರ ಸಹೋದಗಿಗಳಿಂದ ಕೊಲ್ಲಲ್ಪಟ್ಟ ಸುಮಾರು 60 ಲಕ್ಷ ಯಹೂದಿಗಳು ಸ್ಮರಣಾರ್ಥವಾಗಿ ಸ್ಥಾಪಿಸಲಾಗಿದೆ. ಪುಸ್ತಕಗಳ ಹೆಸರಿನ ಹಾಲ್ (Book of Names Hall) ಗೆ ಭೇಟಿ ನೀಡಿದರು, ಇದು ಹೋಲೋಕಾಸ್ಟ್‌ನಲ್ಲಿ ಮೃತಪಟ್ಟವರ ಸ್ಮರಣೆಯನ್ನು ಸಂರಕ್ಷಿಸುವ ಪ್ರಬಲ ಸ್ಮಾರಕವಾಗಿದೆ .
ರಾಷ್ಟ್ರಪತಿ ಹರ್ಜೋಗ್ ಅವರ ಜೊತೆ ಭೇಟಿ
ನರೇಂದ್ರ ಮೋದಿಯವರು ಫೆಬ್ರವರಿ 26 ರಲ್ಲಿ ಇಸ್ರೇಲ್ ರಾಷ್ಟ್ರಪತಿಗಳಾದ ಐಸಾಕ್ ಹರ್ಜೋಗ್ ಅವರನ್ನು ಭೇಟಿ ಮಾಡಿದರು, ಭೇಟಿಯ ಜೊತೆಗೆ ದ್ವಿಪಕ್ಷೀಯ ಸಂಬಂಧ ಮಾತುಕತೆಗಳು ನಡೆದವು .ಹರ್ಜೋಗ್ ಅವರು X ನಲ್ಲಿ ಪೋಸ್ಟ್ ಮಾಡಿ, "ಪ್ರಧಾನಿ ಮೋದಿ, ಇಸ್ರೇಲ್ ಜನರು ನಿಮ್ಮನ್ನು ಮುಕ್ತ ತೋಳುಗಳಿಂದ ಸ್ವಾಗತಿಸುತ್ತಾರೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ವಿರೋಧ ಪಕ್ಷದ ಟೀಕೆ
ಭಾರತದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ಮೋದಿಯವರ ಭಾಷಣೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಗಾಜಾದಲ್ಲಿ ಕೊಲ್ಲಲ್ಪಟ್ಟ ಅನೇಕ ಯುವಕರು, ಪುರುಷರು, ಮಕ್ಕಳು ಮತ್ತು ಮಹಿಳೆಯರ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಬೇಕು ಎಂದು ಹೇಳಿದ್ದರು. ಗಾಜಾದಲ್ಲಿ ಕೊಲ್ಲಲ್ಪಟ್ಟ 30,000ಕ್ಕೂ ಅಧಿಕ ಪ್ಯಾಲೆಸ್ಟಿಯನರ ಬಗ್ಗೆ ಸ್ಪಷ್ಟ ಉಲ್ಲೇಖ ನೀಡಲಿಲ್ಲ ಎಂದು ಟೀಕೆ ಮಾಡಿದರು.
ಹಾಗಾಗಿ ಭಾರತ ಮತ್ತು ಇಸ್ರೇಲ್ ನ ನಡುವೆ ಎಂದೆದಿಗೂ ಸಂಬಂಧ ಮುರಿದಿಲ್ಲ ಮುರಿಯುವುದಿಲ್ಲ ಎಂಬುದು ಎರಡು ದೇಶಗಳ ಜನತೆಗಳ ಆಶಯವಾಗಿದೆ.
- Get link
- X
- Other Apps
Popular Posts
“Toxic” ಟೀಸರ್ ಬಿಡುಗಡೆ: ಯಶ್ ಹೊಸ ಅವತಾರ, ಡಾರ್ಕ್ ಥೀಮ್ ಮತ್ತು ಭಾರೀ ನಿರೀಕ್ಷೆಗಳು
- Get link
- X
- Other Apps
ರಷ್ಮಿಕಾ - ವಿಜಯ್ ದೇವರಕೊಂಡ ಇಬ್ಬರ ವಿವಾಹ, ಉದಯಪುರದಲ್ಲಿ ಸಜ್ಜಾದ ವಿರೋಶ್ ವಿವಾಹ
- Get link
- X
- Other Apps

Comments
Post a Comment